ಉದಯನ (ಕೋಸಲರಾಜ): ದಕ್ಷಿಣ ಕೋಸಲದಲ್ಲಿ 6ನೆಯ ಶತಮಾನದಲ್ಲಿ ಅಧಿಕಾರಕ್ಕೆ ಬಂದ ಪಾಂಡವ ವಂಶದ (ಚಂದ್ರವಂಶದ) ರಾಜರಲ್ಲಿ ಒಬ್ಬ. ಈ ಉದಯನ ಕಲಂಬ ಶಾಸನದಲ್ಲಿ ಹೆಸರಿಸಲಾಗಿರುವ ಬಾಂಡ ಜಿಲ್ಲೆಯಲ್ಲಿ ಆಳುತ್ತಿದ್ದ ಪಾಂಡವ ಮನೆತನಕ್ಕೆ ಸೇರಿದ ಉದಯನನಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಉದಯನ ರಾಜನ ಮೊಮ್ಮಗನಾದ ತಿವಾರಿ ಈ ರಾಜಮನೆತನದಲ್ಲಿ ಅತ್ಯಂತ ಪ್ರಸಿದ್ಧ ರಾಜನಾಗಿದ್ದ. (ಜಿ.ಆರ್.ಆರ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ